Karnataka State Government Employees Association of the Blind

ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಅಂಧ ನೌಕರರ ಸಾಮರ್ಥ್ಯ, ಕರ್ತವ್ಯಗಳ ಹಂಚಿಕೆ ಹಾಗೂ ಹಂಚಿಕೆಯಾದ ಕರ್ತವ್ಯಗಳಿಗೆ ಪೂರಕವಾದ ಪರಿಕರಗಳನ್ನು ಒದಗಿಸುವುದು ಹಾಗೂ ವಾತಾವರಣವನ್ನು ಸೃಷ್ಟಿಸಬೇಕಾದ ಅವಶ್ಯಕತೆ ಇರುವುದರಿಂದ ಹಾಗೂ ಹೋರಾಟದ ಫಲವಾಗಿ ಗಳಿಸಿದ ಉದ್ಯೋಗ ಭದ್ರತೆಯನ್ನು ಕಾಯ್ದುಕೊಳ್ಳುವುದು ಹಾಗೂ ಅಂಧ ಉದ್ಯೋಗಿಗಳ ಘನತೆ ಮತ್ತು ಗೌರವಗಳನ್ನು ಸಂರಕ್ಷಿಸಿಕೊಳ್ಳಲು ಅಂಧ ಸರ್ಕಾರಿ ನೌಕರರ ಸಂಘಟನೆಯ ಅನಿವಾರ್ಯತೆಯನ್ನು ಮನಗಂಡು ಸಂಘಟಿತ ಚೌಕಟ್ಟಿನಲ್ಲಿ ಅಧಿಕೃತ ಆಯಾಮಕ್ಕಾಗಿ ಅಭಿಪ್ರಾಯವನ್ನು ಸಂಗ್ರಹಿಸಿ ದಿನಾಂಕ 12-02-2017 ರಂದು ಮೈಸೂರಿನ ಜೆ.ಎಲ್.ಬಿ. ರಸ್ತೆಯ ರೋಟರಿ ಶಾಲಾ ಸಭಾಂಗಣದಲ್ಲಿ ಸಂಘಟಿತ ಚೌಕಟ್ಟಿಗೆ ಬುನಾದಿ ಹಾಕಲು ತೀರ್ಮಾನಿಸಲಾಯಿತು. ಈ ಸುದಿನದಂದು ರಾಜ್ಯದೆಲ್ಲೆಡೆಯಿಂದ ಆಗಮಿಸಿದ ಹೆಚ್ಚಿನ ಸಂಖ್ಯೆಯ ರಾಜ್ಯ ಸರ್ಕಾರಿ ಅಂಧ ನೌಕರರು ಸಂಘಟಿತಗೊಳ್ಳಲು ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯನ್ನು ರಚಿಸಲು ಒಮ್ಮತದ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.